Index   ವಚನ - 100    Search  
 
ಹಂದಿಯಾಗದೆ, ಸೊಣಗನಾಗದೆ, ಮೃಗನಾಗದೆ, ಪಕ್ಷಿಯಾಗದೆ, ಕುರಿ ಬಳ್ಳು ಕತ್ತೆಯಾಗದೆ, ಚೆಂದವಾಯಿತ್ತು [ಚೆ]ಂದವಾಯಿತ್ತು. ಹಿಂದಣ ಜನ್ಮದ ಪರಿಯಲ್ಲಿ ಮಾನವನಾಗಿ ಹುಟ್ಟಿ, [ಚೆಂ]ದವಾಯಿತ್ತು [ಚೆಂ]ದವಾಯಿತ್ತು. ಚೆಂದವಾದ ದೇಹ ವಿಚ್ಛಂದವಾಗದ ಮುನ್ನ, ತಂದೆ ಸೊಡ್ಡಳಂಗೆ ಶರಣೆಂದು ಬದುಕಿದೆನಯ್ಯಾ