ಅಂಗಕ್ಕೆ ಲಿಂಗಕ್ಕೆ ಪೊಂಗೆ ಪರಿಮಳದ ಶೃಂಗಾರದ ಹಾರ.
ಕಂಗಳ ಬೆಳಗಿನಲ್ಲಿ ಮಂಗಳದ ಮಹಾಬೆಳಗಿರುತಿರಲು,
ಇದ ಅಂಗವಿಸಿ ನೋಡಿ,
ಎರಡರ ಸಂಗಸುಖವನೊಂದುಗೂಡಿ,
ತಾನೇ ಬೇರೆ ಲಿಂಗವಾಗಿ ನಿಂದು,
ಅಂಗವಳಿಯದೆ, ಬಿಂದು ತುಳುಕದೆ,
ನಂದಿ ಮುಂದುಗೆಡದ ಮುನ್ನ,
ನಿಮ್ಮೊಳು ಒಂದಾದ ಲಿಂಗೈಕ್ಯವನರಿದು,
ಕಣ್ದೆರೆದು ಕರಗಿ ಆಲಿ ನೀರಾದಂತಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.