Index   ವಚನ - 9    Search  
 
ಅಂಗವದಾರದು? ಲಿಂಗವದಾರದು? ಸಂಗವದಾರದು? ಸಮರಸವ ದಾರದು? ಸಂದೇಹದಿಂದ ಮುಂದುಗಾಣದೆ ಒಂದೊಂದ ಕಲ್ಪಿಸಿಕೊಂಡು ಬಂದಿರಲ್ಲಾ ಭವ ಭವದಲ್ಲಿ. ಅಂಗವೆ ಗುರು, ಲಿಂಗವೆ ಪ್ರಾಣ, ಸಂಗವೆ ಜಂಗಮ, ಸಮರಸವೆ ಪ್ರಸಾದ. ಈ ಚತುರ್ವಿಧವು ಒಂದಂಗ. ಈ ಚತುರ್ವಿಧವ ಶ್ರುತಿ ಸ್ಮೃತಿಗಳರಿಯವು, ನಿಮ್ಮ ಶರಣಬಲ್ಲ. ಆ ಶರಣನೆ ಶಿವನವಾ. ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ನಿನ್ನ ನೀನೆ ಬಲ್ಲೆ.