Index   ವಚನ - 27    Search  
 
ಅಯ್ಯಾ ಧರೆಯ ಮೇಲೆ ಹುಟ್ಟಿದವರೆಲ್ಲ ವಾಕ್ಕುಜಾಲವ ಕಲಿತುಕೊಂಡು, ಅನುಭಾವವ ಬಲ್ಲವೆಂದು ನುಡಿವರು. ಅನುಭಾವವೆಂತಿಪ್ಪುದೆಂದರಿಯರು. ತೂರ್ಯಾತೂರ್ಯ ನುಡಿಯ ಪರಾತ್ಪರದ ನುಡಿ ಎಂದು ಹರಶರಣರ ವಾಕ್ಯವ ಕಲಿತುಕೊಂಡು ನುಡಿದಾಡುವರು. ತೂರ್ಯಾತೂರ್ಯವೆಂಬುದು ನಾಮರೂಪಿಗುಂಟೆ? ಪರಾತ್ಪರವೆಂಬ ವಾಕ್ಯ ಮನಸಿಂಗುಂಟೆ? ಹೆಸರಿಗೆ ಬಾರದ ಘನವೆಂದು ನೀವೆ ಹೇಳುತಿರ್ದು ಮತ್ತೆ ಹೆಸರಿಗೆ ತಂದು ನುಡಿದಾಡುವರು. ಇದು ಹುಸಿಯೋ, ದಿಟವೊ? ಇದು ಹಸುಮಕ್ಕಳಾಟ. ಸಸಿನೆ ನೆನೆದು ಬದುಕಿದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.