Index   ವಚನ - 54    Search  
 
ಆದಿ ನಿರಾಳ, ಮಧ್ಯ ನಿರಾಳ, ಊರ್ಧ್ವ ನಿರಾಳ. ಪ್ರಮಾಣು ನಿರಾಳ, ಅಪ್ರಮಾಣು ನಿರಾಳ. ಆಕಾರವು ನಿರಾಳ, ಉಕಾರವು ನಿರಾಳ, ಮಕಾರವು ನಿರಾಳ, ನಿರಾಳವೆಂಬುದು ನಿರಾಳ, ಸುರಾಳವೆಂಬುದು ನಿರಾಳ, ಅವಿರಳವೆಂಬುದು ನಿರಾಳ. ಬಂದೆನೆಂಬುದು ನಿರಾಳ, ಹೋದೆನೆಂಬುದು ನಿರಾಳ. ಅದೆಂತೆದಡೆ; ಪ್ರಣಮ ನಿರಾಳವಾದ ಕಾರಣ ಪ್ರತಿಯಿಲ್ಲ. ಪ್ರತಿಯಿಲ್ಲವಾಗಿ, ಅಪ್ರತಿಮ ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಸಂಗಮದೇವ.