Index   ವಚನ - 60    Search  
 
ಆಸೆಯನುಳಿದು ನಿರಾಸೆಯಲ್ಲಿ ನಿಂದು, ವೇಷವ ಮರೆದು, ಜಗದ ಹೇಸಿಯಾಟವ ತೊರೆದು, ಮೀಸಲಾಗಿದ್ದ ಮನವನೆ ಲಿಂಗವ ಮಾಡಿ, ಗಾಸಿಗೊಳಗಾಗುವ ತನುವನೆ ಗುರುವ ಮಾಡಿ, ಇವಿಷ್ಟಕ್ಕೂ ಕರ್ತನಾಗಿರುವ ಪ್ರಾಣವನ್ನೆ ಜಂಗಮವ ಮಾಡಿ, ಈ ತ್ರಿವಿಧವನು ಏಕವ ಮಾಡುವೆ. ಆ ಭಾವವನೆ ಭಾವರುಚಿ ಪ್ರಸಾದವ ಮಾಡುವೆ. ಈ ತ್ರಿವಿಧವನರಿದು ಅಂಗವಿಸಿದವನೆ ಎನ್ನ ದೇವನೆಂದು ಕಾಂಬೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ, ನೀವು ಸಾಕ್ಷಿಯಾಗಿ.