ಈ ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದಡೆ:
ಪೃಥ್ವಿ ಪೃಥ್ವಿಯನೆ ಕೂಡಿ, ಅಪ್ಪು ಅಪ್ಪುವನೆ ಕೂಡಿ,
ಅಗ್ನಿ ಅಗ್ನಿಯನೆ ಕೂಡಿ, ವಾಯು ವಾಯುವನೆ ಕೂಡಿ,
ಆಕಾಶ ಆಕಾಶವನೆ ಕೂಡಿ,
ಪಂಚತತ್ವವೆಲ್ಲ ಹಂಚುಹುರಿಯಾಗಿ,
ಹಿಂಚುಮುಂಚು ಮಾಡುವ ಮನದ ಸಂಚಲವಡಗಿ,
ಕರ್ಮದ ಗೊಂಚಲ ನಿಂದ ನಿಶ್ಚಿಂತ ನಿಜೈಕ್ಯಂಗೆ
ನಮೋ ನಮೋ ಎನುತಿರ್ದೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Ī mahāghana nelegoṇḍippa śaraṇana nele entippudendaḍe:
Pr̥thvi pr̥thviyane kūḍi, appu appuvane kūḍi,
agni agniyane kūḍi, vāyu vāyuvane kūḍi,
ākāśa ākāśavane kūḍi,
pan̄catatvavella han̄cuhuriyāgi,
hin̄cumun̄cu māḍuva manada san̄calavaḍagi,
karmada gon̄cala ninda niścinta nijaikyaṅge
namō namō enutirde,
basavapriya kūḍalacennabasavaṇṇā.