ಉದಯ, ಮಧ್ಯಾಹ್ನ ಅಸ್ತಮಯವೆಂಬ ತ್ರಿಕಾಲದಲ್ಲಿ
ತ್ರಿವಿಧ ಪೂಜೆಯ ಮಾಡಬೇಕೆಂಬರು,
ಈ ತ್ರಿವಿಧದ ನೆಲೆಯನರಿಯರು.
ಲಿಂಗಲಿಂಗವೆಂದು ಲಿಂಗವನೆ ಅರ್ಚಿಸಿ,
ಲಿಂಗವನೆ ಪೂಜಿಸಿ, ಅಂಗ ಭಿನ್ನವಾಯಿತ್ತು.
ಆರಾರಿಗೆಂದರೆ,
ಸ್ವರ್ಗ, ಮತ್ರ್ಯ, ಪಾತಾಳದವರೆಗೆ
ಮೂರುಲೋಕವು ಸೆರೆಸೂರೆಹೋಯಿತ್ತು.
ಗುರುಲಿಂಗಜಂಗಮ ತ್ರಿವಿಧವು ಏಕವಾದ ಭೇದವ
ನಿಮ್ಮ ಶರಣರೇ ಬಲ್ಲರಲ್ಲದೆ,
ಈ ಮರಣಬಾಧೆಗೊಳಗಾಗುವ ಮತ್ರ್ಯರೆತ್ತ ಬಲ್ಲರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Udaya, madhyāhna astamayavemba trikāladalli
trividha pūjeya māḍabēkembaru,
ī trividhada neleyanariyaru.
Liṅgaliṅgavendu liṅgavane arcisi,
liṅgavane pūjisi, aṅga bhinnavāyittu.
Ārārigendare,
svarga, matrya, pātāḷadavarege
mūrulōkavu seresūrehōyittu.
Guruliṅgajaṅgama trividhavu ēkavāda bhēdava
nim'ma śaraṇarē ballarallade,
ī maraṇabādhegoḷagāguva matryaretta ballaru,
basavapriya kūḍalacennabasavaṇṇā.