Index   ವಚನ - 83    Search  
 
ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ? ಹಾಡಲೇಕೊ ಹರನ ಕಂಡಾತಂಗೆ? ಬೇಡಿ ಕಾಡಲೇಕೊ ನೋಡುವ ಕಂಗಳಿಗೆ ತೃಪ್ತಿಯಾದವಂಗೆ? ನೀಡಿ ಮಾಡಲೇಕೊ ಉಡುವಾತನು ಉಂಬುವಾತನು ಏಕವಾದ ಮೇಲೆ. ಮುಂದು ನೋಡುವರಾರುಂಟು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?