ಜಂಗಮಲಿಂಗವೆಂತಾಹನೆಂದರೆ:
ಇಂತೀ ವಿಶ್ವಬ್ರಹ್ಮಾಂಡವು ತನ್ನ ಕುಕ್ಷಿಯೊಳು ನಿಕ್ಷೇಪವಾಗಿ,
ತಾ ನಿರ್ಗಮನಿಯಾಗಿ, ಲಿಂಗರೂಪಾಗಿ ಸುಳಿಯಬಲ್ಲರೆ
ಜಂಗಮಲಿಂಗವೆಂಬೆ. ಅದಕ್ಕೆ ನಮೋ ನಮೋ.
ಆ ನಿಲವಿಂಗೆ ಭವವಿಲ್ಲ, ಬಂಧನವಿಲ್ಲ.
ಇಂತಲ್ಲದೆ ವೇಷವ ಹೊತ್ತು,
ಹೊರವೇಷದ ವಿಭೂತಿ ರುದ್ರಾಕ್ಷಿಯಂ ತೊಟ್ಟು,
ಕಾಸು ಹುಲುಸಕ್ಕೆ ಕೈಯಾಂತು,
ವೇಶಿ ದಾಸಿಯರ ಬಾಗಿಲ ಕಾಯ್ದು,
ಲೋಕದೊಳಗೆ ಘಾಸಿಯಾಗಿ,
ಜಂಗಮವೇಷಕ್ಕೆಲ್ಲ ಭಂಗವ ಹೊರಿಸಿ,
ಕಣ್ಣುಗಾಣದೆ ಜಾರಿ ಜರಿಯಬಿದ್ದು, ತಾ ದೂರಿಗೆ ಬಂದು,
ಈ ಮೂರಕ್ಕೊಳಗಾಗಿ ಗಾರಾಗಿ ಹೋಗುವರ ವೇಷಕ್ಕೆ ಶರಣಾರ್ಥಿ.
ಅವರ ಸುತ್ತಿರ್ದ ಪಾಶವ ಕಂಡು ಹೇಸಿತ್ತೆನ್ನ ಮನ,
ನಿಮ್ಮಾಣೆ ಬಸವಪ್ರಿಯ ಕೂಡಲಸಂಗಮದೇವಾ.
Art
Manuscript
Music
Courtesy:
Transliteration
Jaṅgamaliṅgaventāhanendare:
Intī viśvabrahmāṇḍavu tanna kukṣiyoḷu nikṣēpavāgi,
tā nirgamaniyāgi, liṅgarūpāgi suḷiyaballare
jaṅgamaliṅgavembe. Adakke namō namō.
Ā nilaviṅge bhavavilla, bandhanavilla.
Intallade vēṣava hottu,
horavēṣada vibhūti rudrākṣiyaṁ toṭṭu,
kāsu hulusakke kaiyāntu,