ಮರೆದರೆ ಮಾಯೆ, ಅರಿದರೆ ಮಾಯೆ ಇಲ್ಲ,
ಅರಿವು ಮರವೆ ಎರಡ ನೂಂಕಿ ನಿಂದರೆ,
ಮುಂದೆ ಕಣ್ಣು ತೆರಪಾಗಿ ತೋರುವ
ಬಯಲೆ ಲಿಂಗದ ಬೆಳಗು.
ಆ ಲಿಂಗದ ಬೆಳಗೆ ನೆಮ್ಮುಗೆಯಾದರೆ ಲಿಂಗೈಕ್ಯವು.
ಆ ಲಿಂಗೈಕ್ಯವು ನಿಜವಾದರೆ ನಿಶ್ಚಿಂತವು.
ನಿಶ್ಚಿಂತದಲ್ಲಿ ಲೀಯವಾದರೆ, ನಿರವಯವು,
ಇದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ,
ಇದನರಿಯದೆ ವೇದ ಪುರಾಣ ಶಾಸ್ತ್ರ ಆಗಮ ಇವನೊಂದನು
ಓದಿದರೆ ಹಾಡಿದರೆ ಕೇಳಿದರೆ ಕಾಯ ವಾಯವೆಂದರು,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.