Index   ವಚನ - 180    Search  
 
ಮಾತುಬಲ್ಲಾತಂಗೆ ಮಥನದ ಹಂಗೇಕೆ? ರೇತವನರಿದಾತಂಗೆ ತೀರ್ಥದ ಹಂಗೇಕೆ? ಜ್ಯೋತಿಯನರಿದಾತಂಗೆ ಕತ್ತಲೆಯ ಹಂಗೇಕೆ? ಪರಮಾರ್ಥವನರಿದಾತಂಗೆ ಪ್ರಸಾದದ ಹಂಗೇಕೆ? ಲೋಕವನರಿದಾತಂಗೆ ಏಕಾಂತದ ಹಂಗೇಕೆ? ಇಂತೀ ತೆರನನರಿದ ಶರಣಂಗೆ ಸರ್ವ ಉಪಚಾರಸಂಕಲ್ಪವೇಕೆ ಹೇಳಾ ಬಸವಪ್ರಿಯ ಕೂಡಲಚನ್ನಬಸವಣ್ಣ