Index   ವಚನ - 183    Search  
 
ಮೀಸಲು ಸೂಸಲಾಗಿ, ದೋಸೆ ಕಡಬು ಹೊಯ್ದು, ಹಬ್ಬವ ಮಾಡಿಹೆನೆಂಬ ಹೇಸಿಗಳ ಮಾತ ಕೇಳಲಾಗದು. ಅದೇಕೆ ಎಂದರೆ, ಲಿಂಗ ಜಂಗಮದ ಭಾಷೆ ಸಲ್ಲದಾಗಿ, ಇನ್ನು ಮೀಸಲಾವುದೆಂದರೆ, ಭಾಷೆಗೇರಿಸಿದ ತನುವೆ ಅಡ್ಡಣಿಗೆ, ಘನವೆ ಹರಿವಾಣ, ಮನ ಮೀಸಲೋಗರ, ಈ ಅನುವನರಿದು, ಮಹಾಲಿಂಗಕ್ಕೆ ಅರ್ಪಿತವ ಮಾಡುವನೆ ಸದ್ಭಕ್ತನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.