Index   ವಚನ - 190    Search  
 
ರಾಗವ ಹಾಡಿದವರೆಲ್ಲರು ರೋಗ ರುಜಿನಕ್ಕೆ ಒಳಗಾಗಿ ಸತ್ತುಹೋದರು. ರಚನೆ ಮಾಡಿದವರೆಲ್ಲರು ಸುಚಿತ್ತ ಕೆಟ್ಟು ನಿಂದೆಕುಂದೆಗೊಳಗಾಗಿ ಸತ್ತುಹೋದರು. ರಾಗರಚನೆಯ ಬಿಟ್ಟು, ಮೂಗಮುಗ್ಧರಾಗಿಪ್ಪವರ ನಾನಾರನು ಕಾಣೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .