ವಜ್ರದ ಮನೆಯೊಳಗಿರ್ದು,
ಗೊರಲೆ ಮುಟ್ಟಿತೆಂಬ ಸಂದೇಹವೇಕೆ ?
ಭದ್ರಗಜ ಮೇಲೆ ಬರುತಿರ್ದು ಕೆಳಗಿರ್ದ
ಗುಜ್ಜನಾಯಿ ಮುಟ್ಟಿತೆಂಬ ಸಂದೇಹವೇಕೆ?
ಸಂಜೀವನ ಕೈಯ ಸಾರಿರ್ದು
ಇಂದಿಗೆ ನಾಳಿಗೆಂಬ ಸಂದೇಹವೇಕೆ ?
ಸಜ್ಜನ ಸದ್ಭಕ್ತರ ಸಂಗದೊಳಗಿರ್ದು,
ಸತ್ತೆನೋ, ಬದುಕಿದೆನೋ ಎಂಬ ಸಂದೇಹವೇಕೆ ?
ಹತ್ತರಡಿಯ ಬಿದ್ದ ಹಾವು ಸಾಯದೆಂದು
ಗಾದೆಯ ಮಾತ ನುಡಿವರು.
ನಿತ್ಯರಪ್ಪ ಶರಣರ ಸಂಗದೊಳಗಿರ್ದು,
ಮತ್ತೊಂದು ಉಂಟೆಂದು ಭಾವಿಸಿ ನೋಡುವ
ಕತ್ತೆಮನುಜರ ಅತ್ತ ಹೊದ್ದದೆ,
ಇತ್ತಲೆ ನಿಂದು ನಾಚಿ ನಗುತಿರ್ದ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
Art
Manuscript
Music
Courtesy:
Transliteration
Vajrada maneyoḷagirdu,
gorale muṭṭitemba sandēhavēke?
Bhadragaja mēle barutirdu keḷagirda
gujjanāyi muṭṭitemba sandēhavēke?
San̄jīvana kaiya sārirdu
indige nāḷigemba sandēhavēke?
Sajjana sadbhaktara saṅgadoḷagirdu,
sattenō, badukidenō emba sandēhavēke?
Hattaraḍiya bidda hāvu sāyadendu
gādeya māta nuḍivaru.
Nityarappa śaraṇara saṅgadoḷagirdu,
mattondu uṇṭendu bhāvisi nōḍuva
kattemanujara atta hoddade,
ittale nindu nāci nagutirda,
nam'ma basavapriya kūḍalacennabasavaṇṇa.