ಸತಿಸುತ ಮಾತಾಪಿತರಂದದಿ
ಮೋಹದಲಿ ಮನಮಗ್ನವಾದರೆ,
ಅವನಿಗೆ ಲಿಂಗವಿಲ್ಲ , ಲಿಂಗಕ್ಕೆ ತಾನಿಲ್ಲ.
ಅದೇನು ಕಾರಣವೆಂದರೆ,
ಆತನ ಧ್ಯಾನ ಸತಿಯ ಮೇಲೆ ಸುತರ ಮೇಲೆ
ಮಾತಾಪಿತರ ಮೇಲೆ ಇಪ್ಪುದಲ್ಲದೆ,
ಲಿಂಗದ ಮೇಲಿಲ್ಲ. ಅದು ಕಾರಣ,
ಆತ ಕಟ್ಟಿದುದು ಲಿಂಗವಲ್ಲ ,
ತೊಟ್ಟುದುದು ವಿಭೂತಿ ರುದ್ರಾಕ್ಷಿಯಲ್ಲ .
ಅದು ಕಾರಣ, ಆತನಾಚಾರಕ್ಕೆ ದೂರ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .