ಹರಹರ ಎಂದು ಹತ್ತುಬಾರಿ ಎನಬಹುದಲ್ಲದೆ,
ಹರಿವ ಮನವ ಮೆಟ್ಟಿ, ಮನವ ಲಿಂಗದೊತ್ತಿನಲ್ಲಿ
ನಿಂದಿರಲರಿಯದುನೋಡಾ!
ಇದು ಕಾರಣ, ತನುವ ಗುರುವಿಂಗಿತ್ತು , ಮನವ ಲಿಂಗಕ್ಕಿತ್ತು,
ಧನವ ಜಂಗಮಕ್ಕಿತ್ತು, ತ್ರಿವಿಧವನು ತ್ರಿವಿಧಕಿತ್ತ ಬಳಿಕ,
ಒಂದಲ್ಲದೆ ಎರಡುಂಟೆ?
ಇದು ಮುಂದೆ ಆವನಾನೊಬ್ಬ ಭಕ್ತನು
ನೋಡಿ ನಡೆವುದಕ್ಕೆ ಇದೇ ಸಾಧನ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.