Index   ವಚನ - 230    Search  
 
ಹಸಿವಿನಾಸೆಗೆ ಅಶನವ ಕೊಂಬರು, ವಿಷಯದಾಸೆಗೆ ಹುಸಿಯ ನುಡಿವರು. ಹಸನಾಗಿ ವ್ಯಸನವ ಹೊತ್ತು, ಭಸಿತವ ಹೂಸಿ ವಿಶ್ವವ ತಿರುಗಿದರು. ಈ ಹುಸಿಯ ಬಿಟ್ಟು, ಮಾಯೆಯ ಮಸಕವ ಮಾಣ್ದಲ್ಲದೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಾ.