Index   ವಚನ - 241    Search  
 
ಹುತ್ತದ ಮೇಲಣ ಸರ್ಪ ಸತ್ತಿತ್ತೆಂದು ಮುಟ್ಟಿ ಬಾಳ್ದ ಮನುಜರುಂಟೆ? ಒತ್ತಿಗೆ ಬಂದ ವ್ಯಾಘ್ರನನಪ್ಪಿಕೊಂಡ ಮನುಜರುಂಟೆ? ತತ್ವವ ಬಲ್ಲ ಶರಣರು ಸತ್ತ ಹಾಗೆ ಇದ್ದರೆ, ಇವರು ಕತ್ತೆಯ ಮನುಜರೆಂದು ಮರ್ತ್ಯದವರು ಒತ್ತಿ ನುಡಿದರೆ, ಅವರೆತ್ತ ಬಲ್ಲರೊ? ಅವರ ನುಡಿದವರು ಅತ್ತಲೂ ಅಲ್ಲ , ಇತ್ತಲೂ ಅಲ್ಲ ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.