Index   ವಚನ - 251    Search  
 
ಹೊನ್ನ ಗಳಿಸಿದರೇನಯ್ಯಾ, ಹೊಲೆಯರ ಮನೆಯಲ್ಲಿದ್ದರೆ? ಹೆಣ್ಣ ಗಳಿಸಿದರೇನಯ್ಯಾ, ವೇಶಿಯರ ಮನೆ ದಾಸಿಯಾಗಿದ್ದರೆ? ಮಣ್ಣ ಗಳಿಸಿದರೇನಯ್ಯಾ, ಉಣ್ಣದಾಹಾರವನುಂಡರೆ? ಹೋಗುವ ಹಾಳುಗೇರಿಯಾಗಿರದೆ, ಇದನರಿದು ಮಹಾಘನವನೆ ಮರೆದು, ಮತ್ತೆ ಹೊನ್ನು ಹೆಣ್ಣು ಮಣ್ಣು ತನ್ನದೆಂಬರು, ಕಣ್ಣುಗಾಣದ ಕುರುಡರಂತಾದರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.