Index   ವಚನ - 3    Search  
 
ಕಂಡ ಚಿತ್ತ ವಸ್ತುವಿನಲ್ಲಿ ಮಗ್ನವಾದ ಮತ್ತೆ, ಸಂಸಾರ ವಿಷಯಕ್ಕೆ ಮತ್ತನಪ್ಪುದೆ? ಮತ್ತೆ ಭಕ್ತರ ಗೃಹ ರಾಜದ್ವಾರದ ತಪ್ಪಲ ಕಾಯ್ವದೆ? ಆ ಚಿತ್ತ ತೊಟ್ಟುಬಿಟ್ಟ ಹಣ್ಣು, ಕಟ್ಟಿಸತ್ತ ಬಿದಿರು, ದೃಷ್ಟ ನಷ್ಟವಾದ ಅಂಗಕ್ಕೆ ಮತ್ತೆ ಬಪ್ಪುದೆ ಪುನರಪಿಯಾಗಿ? ಇದು ನಿಶ್ಚಯ, ನಿಜಲಿಂಗಾಂಗ ನಿರ್ಲೇಪನ ಹೊಲಬು. ಮತ್ತೆ ಜಗದ ಮೊತ್ತದವನಲ್ಲ , ನಿಃಕಳಂಕ ಕೂಡಲಚೆನ್ನಸಂಗಮದೇವ ತಾನಾದ ಶರಣ.