ಕರ್ಮದಿಂದ ಕರ್ಮವ ಕಂಡಲ್ಲದೆ, ಮುಂದಣವರ್ಮವನರಿಯಬಾರದು.
ವರ್ಮದಿಂದ ಸರ್ವವ ತಿಳಿದಲ್ಲದೆ,
ಸತ್ಕರ್ಮ ನಾಸ್ತಿ ವಿರಕ್ತನಾಗಬಾರದು.
ಮುಕುರದೊಳಗಣ ನೆಳಲ ತಾ ನೋಡಿ ಕಾಬಂತೆ,
ಇದು ಕ್ರಿಯಾಪಥ, ವಿರಕ್ತನ ಶ್ರದ್ಧೆ.
ಅದು ಸನ್ಮುಕ್ತವಾದಲ್ಲಿ ಮಾಡೆನೆಂಬ ಶಂಕೆ.
ಮಾಡಿದೆನೆಂಬ ಕೃತ್ಯ ಉಭಯದ ಕಲೆಯಿಲ್ಲ,
ನಿಃಕಳಂಕ ಕೂಡಲಚೆನ್ನಸಂಗಮದೇವ ತಾನಾದ ಶರಣ.
Art
Manuscript
Music
Courtesy:
Transliteration
Karmadinda karmava kaṇḍallade, mundaṇavarmavanariyabāradu.
Varmadinda sarvava tiḷidallade,
satkarma nāsti viraktanāgabāradu.
Mukuradoḷagaṇa neḷala tā nōḍi kābante,
idu kriyāpatha, viraktana śrad'dhe.
Adu sanmuktavādalli māḍenemba śaṅke.
Māḍidenemba kr̥tya ubhayada kaleyilla,
niḥkaḷaṅka kūḍalacennasaṅgamadēva tānāda śaraṇa.