Index   ವಚನ - 6    Search  
 
ಪೃಥ್ವಿಯಲ್ಲಿ ಅಪ್ಪುಸಾರವಿಲ್ಲದಿರೆ ಬೀಜವ ತಳಿಯಲಾಗಿ, ಪ್ರತ್ಯಕ್ಷ ಅಂಕುರ ದೃಷ್ಟವಪ್ಪುದೆ? ಶ್ರದ್ಧೆ ಸನ್ಮಾರ್ಗ ಭಕ್ತಿ ವಿಶ್ವಾಸವಿಲ್ಲದಿದ್ದಡೆ ಸದ್ಭಕ್ತನಪ್ಪನೆ? ಇಂತೀ ದೃಷ್ಟ ಸಿದ್ಧಾಂತದಿಂದ ತಪ್ಪು ಕುಳಿತ ಮತ್ತೆ, ದೃಷ್ಟಾಂತರವ ಇದಿರ ಕೈಯಲ್ಲಿ ಕೇಳಲುಂಟೆ? ನುಂಗಬಾರದ ಘೃತ, ಉಗುಳಬಾರದ ಪ್ರಿಯ, ಬಿಡಬಾರದ ಭಕ್ತಿ, ವಿಶ್ವಾಸವಿಲ್ಲದ ಆ ಭಕ್ತಿಪೂಜೆ, ಘನಸಿಂಧುವಿನಲ್ಲಿ ನಾನಾ ವರ್ಣವ ಕದಡಿದಂತಾಯಿತ್ತು. ಇದನಿನ್ನಾರಿಗುಸುರುವೆ! ನಿಃಕಳಂಕ ಕೂಡಲಚೆನ್ನಸಂಗಮದೇವಾ, ನೀನೆ ಬಲ್ಲೆ.