ಭಕ್ತನಂತೆ ತ್ರಿವಿಧ ಮಲಕ್ಕಿಕ್ಕುವನೆ ಚಿತ್ತವ?
ವಿರಕ್ತನಂತೆ ಸರ್ವವ್ಯಾಪಾರಕ್ಕೆ ಮೊತ್ತದ
ಇಂದ್ರಿಯ ವರ್ಗದಲ್ಲಿ,
ಸುಚಿತ್ತವ ಬಿಟ್ಟು ಮತ್ತೆ ವಿರಕ್ತನಪ್ಪನೆ?
ಈ ಉಭಯದ ಭಾವವ ನಿಶ್ಚೈಸಿದಲ್ಲಿ,
ಕುಸುಮ ಗಂಧದಂತೆ, ಮುಕುರ ಬಿಂಬದಂತೆ,
ಉರಿ ಕರ್ಪುರದಿರವಿನ ತೆರದಂತೆ,
ನಿಃಕಳಂಕ ಕೂಡಲಚೆನ್ನ ಸಂಗಮದೇವ ತಾನಾದ ಶರಣ.
Art
Manuscript
Music
Courtesy:
Transliteration
Bhaktanante trividha malakkikkuvane cittava?
Viraktanante sarvavyāpārakke mottada
indriya vargadalli,
sucittava biṭṭu matte viraktanappane?
Ī ubhayada bhāvava niścaisidalli,
kusuma gandhadante, mukura bimbadante,
uri karpuradiravina teradante,
niḥkaḷaṅka kūḍalacenna saṅgamadēva tānāda śaraṇa.