Index   ವಚನ - 12    Search  
 
ಅರ್ಪಿತಂಗಳ ನಾರು ಮುಖದಲ್ಲಿ ಬಲ್ಲಡೆ, ಕಲ್ಪಿತಂಗಳು ಕಾಡುವವೆ? ಅರ್ಪಿತಂಗಳು ಆರಿಗೂ ಸಾಧ್ಯವಲ್ಲ. ಅರ್ಪಿತ ಮೂವರ ಬೆನ್ನಲೆ ಹೋಯಿತ್ತು. ಅರ್ಪಿತ ಅಳವಡದ ಭಂಗ ತಮಗುಳಿಯಿತ್ತು ಕಾಣಾ, ಮಹಾಲಿಂಗ ಕಲ್ಲೇಶ್ವರಾ.