ಆವಂಗದಲ್ಲಿದ್ದಡೇನು, ಒಂದು ಸುಸಂಗ
ಸುಶಬ್ದವ ನಿಮಿಷವಿಂಬಿಟ್ಟುಕೊಂಡು,
ಆ ಘಳಿಗೆ ಅಳಿದಡೇನು, ಉಳಿದಡೇನು,
ಸುಸಂಗ ಸುಶಬ್ದವೇದಿಯೆ?
ಲಿಂಗದಲ್ಲಿಯೇ ನಿರುತ ಭರಿತ ಕಾಣಿರೆ, ಶರಣ.
ಮನದಲ್ಲಿ ಚಲಾಚಲಿತವಿಲ್ಲದೆ
ಲಿಂಗವನಿಂಬುಗೊಂಡ ಮಹಂತಂಗೆ
ಬೆದರಿ ಓಡವೆ ಕರ್ಮಂಗಳು?
ಉದರಿಹೋಗವೆ ಭವಪಾಶಂಗಳು?
ಕರ್ಪುರದುರಿಯ ಸಂಗದಂತೆ, ಗುರುಪಾದ ಸೋಂಕು.
ಜ್ಞಾನವಾದ ಬಳಿಕ ಜಡಕರ್ಮವಿಹುದೆ,
ಮಹಾಲಿಂಗ ಕಲ್ಲೇಶ್ವರಾ?
Art
Manuscript
Music
Courtesy:
Transliteration
Āvaṅgadalliddaḍēnu, ondu susaṅga
suśabdava nimiṣavimbiṭṭukoṇḍu,
ā ghaḷige aḷidaḍēnu, uḷidaḍēnu,
susaṅga suśabdavēdiye?
Liṅgadalliyē niruta bharita kāṇire, śaraṇa.
Manadalli calācalitavillade
liṅgavanimbugoṇḍa mahantaṅge
bedari ōḍave karmaṅgaḷu?
Udarihōgave bhavapāśaṅgaḷu?
Karpuraduriya saṅgadante, gurupāda sōṅku.
Jñānavāda baḷika jaḍakarmavihude,
mahāliṅga kallēśvarā?