Index   ವಚನ - 43    Search  
 
ಕೂಪರ ಕೊಲುವಡೆ ಮಸೆದ ಕೂರಲಗು ಮತ್ತೇಕೆ? ಒಲ್ಲೆನೆಂದಡೆ ಸಲದೆ, ಕೊಲೆ ಮರಳಿ ಮತ್ತುಂಟೆ? ಮಹಾಲಿಂಗ ಕಲ್ಲೇಶ್ವರ ಒಲ್ಲೆನೆಂದಟ್ಟಿದಡೆ, ತುಪ್ಪದಲ್ಲಿ ಕಿಚ್ಚ ನಂದಿಸಿದಂತಾಯಿತ್ತು.