ಕೋಗಿಲೆಗಳು ಉಗ್ಘಡಿಸಲು ಮಾಮರಂಗಳ ಮೇಲೆ,
ತುಂಬಿಗಳು ಝೇಂಕಾರದಿಂ ಮೆರೆದು ಮೋಹರಿಸಲು,
ಮಂದಾನಿಲಗಳ ತನ್ನ ಬೇಹಿಗೆ ಕಳುಹಲು,
ಅನಂಗ ತನ್ನ ಬರವೆರಸಿ ಬಂದು ನಿಲಲು,
ರಸಭರಿತವಾಗಿರ್ದ ಪರಿಯ ಕಬ್ಬಿನ ಬಿಲ್ಲೇರಿಸಿ,
ಕುಸುಮ ಸರವನೆ ತೊಟ್ಟು,
ಎಸಲಾರದೆ, ಬಿಲ್ಲು ಬೇರಾಗಿ,
ಇವರೆಲ್ಲರ ಪರಿಯೆಂದು ಬಗೆದುಬಂದೆ,
ಕಾಮಾ ನಿಲ್ಲದಿರೈ.
ನಿನ್ನ ರೂಪ ಮಹಾಲಿಂಗ ಕಲ್ಲೇಶ್ವರದೇವ ಬಲ್ಲ.
ಸಿದ್ಧರಾಮ ನಿನ್ನಳವಲ್ಲ, ಎಲವೊ ಕಾಮಾ.
Art
Manuscript
Music
Courtesy:
Transliteration
Kōgilegaḷu ugghaḍisalu māmaraṅgaḷa mēle,
tumbigaḷu jhēṅkāradiṁ meredu mōharisalu,
mandānilagaḷa tanna bēhige kaḷuhalu,
anaṅga tanna baraverasi bandu nilalu,
rasabharitavāgirda pariya kabbina billērisi,
kusuma saravane toṭṭu,
esalārade, billu bērāgi,
ivarellara pariyendu bagedubande,
kāmā nilladirai.
Ninna rūpa mahāliṅga kallēśvaradēva balla.
Sid'dharāma ninnaḷavalla, elavo kāmā.