ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ
ತಟ್ಟುವ ಮುಟ್ಟುವ ತಾಗುನಿರೋಧ
ಕೊರೆತ ನೆರೆತಗಳ ಹಿಡಿವನೆ
ಶಿವಶರಣನು? ಹಿಡಿಯನು.
ಅದೇನು ಕಾರಣವೆಂದೆಡೆ, ಅದೆ[ಲ್ಲವೂ]
ನಿನ್ನ ಮಾಯೆಯೆಂಬುದನು ಬಲ್ಲನಾಗಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವಾ,
ನಿಮ್ಮ ಶರಣರು ನಿಜಗಲಿಗಳು.
Art
Manuscript
Music
Courtesy:
Transliteration
Jāgra svapna suṣuptigaḷalli
taṭṭuva muṭṭuva tāgunirōdha
koreta neretagaḷa hiḍivane
śivaśaraṇanu? Hiḍiyanu.
Adēnu kāraṇavendeḍe, ade[llavū]
ninna māyeyembudanu ballanāgi.
Idu kāraṇa, mahāliṅga kallēśvaradēvā,
nim'ma śaraṇaru nijagaligaḷu.