Index   ವಚನ - 58    Search  
 
ತಾನಿಲ್ಲದ ಮುನ್ನ ಗುರುವೆಲ್ಲಿಹುದೊ? ಲಿಂಗವೆಲ್ಲಿಹುದೊ? ಜಂಗಮವೆಲ್ಲಿಹುದೊ? ಪ್ರಸಾದವೆಲ್ಲಿಹುದೊ? ಪಾದೋದಕವೆಲ್ಲಿಹುದೊ? ಪರವೆಲ್ಲಿಹುದೊ? ಸ್ವಯವೆಲ್ಲಿಹುದೊ? ತನಗೆ ತೋರಿದ ಗುರು, ತನಗೆ ತೋರಿದ ಲಿಂಗ, ತನಗೆ ತೋರಿದ ಜಂಗಮ, ತನಗೆ ತೋರಿದ ಪ್ರಸಾದ, ತನಗೆ ತೋರಿದ ಪಾದೋದಕ, ತನಗೆ ತೋರಿದ ಪರವು, ತನಗೆ ತೋರಿದ ಸ್ವಯವು. ಗುರುವೆಂದರಿದವನೂ ತಾನೆ, ಲಿಂಗವೆಂದರಿದವನೂ ತಾನೆ, ಜಂಗಮವೆಂದರಿದವನೂ ತಾನೆ. ಪ್ರಸಾದವೆಂದರಿದವನೂ ತಾನೆ, ಪಾದೋದಕವೆಂದರಿದವನೂ ತಾನೆ, ಪರವೆಂದರಿದವನೂ ತಾನೆ, ಸ್ವಯಂವೆಂದರಿದವನೂ ತಾನೆ, ಇಂತಿವೆಲ್ಲವ ಪೆತ್ತರಿವು ತಾನೆ ಸ್ವಯಂಜ್ಯೋತಿ, ಮಹಾಲಿಂಗ ಕಲ್ಲೇಶ್ವರಾ.