ದೇಹದೊಳಗು ದೇಹವಿದ್ದು,
ದೇಹ ಕರಣೇಂದ್ರಿಯಂಗಳ ಪ್ರೇರಿಸುವನು.
ಆ ಲೋಕದ ಆಗುಚೇಗೆ ತನಗಿಲ್ಲ. ಅದೆಂತೆಂದಡೆ:
ಕಮಲಪತ್ರ ಜಲದಂತೆ,
ಆ ಕಹಳೆಯಲ್ಲಿಹ ನಾದದಂತೆ,
ಹುಡಿ ಹತ್ತದ ಗಾಳಿಯಂತೆ,
ನುಡಿ ಹತ್ತದ ಶಬ್ದದಂತಿಪ್ಪನಯ್ಯಾ ಶಿವನು,
ಸರ್ವಾಂತರ್ಯಾಮಿಯಾಗಿ
ಮಹಾಲಿಂಗ ಕಲ್ಲೇಶ್ವರನು.
Art
Manuscript
Music
Courtesy:
Transliteration
Dēhadoḷagu dēhaviddu,
dēha karaṇēndriyaṅgaḷa prērisuvanu.
Ā lōkada āgucēge tanagilla. Adentendaḍe:
Kamalapatra jaladante,
ā kahaḷeyalliha nādadante,
huḍi hattada gāḷiyante,
nuḍi hattada śabdadantippanayyā śivanu,
sarvāntaryāmiyāgi
mahāliṅga kallēśvaranu.