•  
  •  
  •  
  •  
Index   ವಚನ - 164    Search  
 
ಬೆಳಗಿನೊಳಗಣ ರೂಪ ತಿಳಿದು, ನೋಡಿಯೆ ಕಳೆದು, ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ-ಆತ ಲಿಂಗಪ್ರಸಾದಿ! ಜಾತಿ ಸೂತಕವಳಿದು ಶಂಕೆ ತಲೆದೋರದೆ, ನಿಶ್ಶಂಕನಾಗಿ, ಆತ ಸಮಯಪ್ರಸಾದಿ! ಸಕಲ ಭ್ರಮೆಯನೆ ಜರೆದು, ಗುಹೇಶ್ವರಲಿಂಗದಲ್ಲಿ ಪ್ರಸನ್ನವ ಪಡೆದಾತ ಸಂಗನ ಬಸವಣ್ಣನೊಬ್ಬನೆ ಅಚ್ಚಪ್ರಸಾದಿ!
Transliteration Beḷaginoḷagaṇa rūpa tiḷidu, nōḍiye kaḷedu, hiḍiyade hiḍidukoḷḷaballanāgi-āta liṅgaprasādi! Jāti sūtakavaḷidu śaṅke taledōrade, niśśaṅkanāgi, āta samayaprasādi! Sakala bhrameyane jaredu, guhēśvaraliṅgadalli prasannava paḍedāta saṅgana basavaṇṇanobbane accaprasādi!
Hindi Translation प्रकाश के अंदर के प्रकाश का रूप जानकर देख बिना पकड़े पकड़ सकनेवाला वहीं लिंग प्रसादी। जातिसूतक दूरकर शंका न करके नि:शंकित ही समय प्रसादी! सकल भ्रमों को अनादरकर गुहेश्वर लिंग में संगनबसवण्णा एक ही श्रेष्ट प्रसादी। Translated by: Eswara Sharma M and Govindarao B N
Tamil Translation பேரொளியின் வடிவத்தை ஆராய்ந்து கண்டு வேறுவேறாகக் கருதாது, உணர்ந்தால் அவன் இலிங்க பிரசாதி! சாதி, தீட்டு அகன்று, ஐயம் எழாமல் ஐயமற்றவனாயின் அவன் ஸமயபிரசாதி. எல்லா பிரமைகளையும் அகற்றி, குஹேசுவரலிங்கத்தில் பசவண்ணல் ஒருவரே அச்சபிரசாதி! Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಳೆದು ಹಿಡಿಯದೆ = ಪ್ರತ್ಯೇಕಿಸಿ ಬೇರೆ ಬೇರೆ ಎಂದು ಅವಗ್ರಹಿಸದೆ; ಜಾತಿಸೂತಕ = ಜಾತಿನಿಮಿತ್ಯವಾಗಿ ಉಂಟಾಗುವ ಮನೋಮಾಲಿನ್ಯ; ತಿಳಿದು ನೋಡಿಯೆ = ಪರಾಮರ್ಶಿಸಿ ನೋಡಿದರೆ; ಬೆಳಗು = ಮಹಾಬೆಳಗು, ವಿಶ್ವಚೇತನ; ರೂಪ = ದೃಷ್ಟಿಗೋಚರವಾದ ರೂಹು; ಹಿಡಿದುಕೊಳಬಲ್ಲನಾಗಿ = ಅವಧರಿಸಬಲ್ಲನಾಗಿ(ಪರಿಭಾವಿಸಬಲ್ಲನಾಗಿ); Written by: Sri Siddeswara Swamiji, Vijayapura