ಭಾಜನದಲ್ಲಿ ಅಳವಟ್ಟು, ಗಡನಿಸಿದ, ಪದಾರ್ಥಂಗಳ ರೂಪ
ತನ್ನ ಕರಣಂಗಳಲ್ಲಿ ಅವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ,
ಲಿಂಗಾವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ,
ಆ ಪದಾರ್ಥವನು ಲಿಂಗತನುವಿನ ಕರದಿಂದ ಮುಟ್ಟಿ,
ಪದಾರ್ಥದ ಮೃದು ಕಠಿಣ ಶೀತ ಉಷ್ಣಂಗಳ ಸೋಂಕನು
ಇಷ್ಟಲಿಂಗ ಮುಖದಲ್ಲಿ ಅರ್ಪಿಸಿ,
ರೂಪವರ್ಪಿಸುವಡೆ ಇಷ್ಟಲಿಂಗಾರ್ಪಿತ.
ಆ ಇಷ್ಟಲಿಂಗಮುಖದಿಂದರ್ಪಿತವಾದ ರೂಪಪ್ರಸಾದವನು
ರುಚಿಕರದಿಂದ ಪದಾರ್ಥಮಂ ಮಾಡಿ,
ಜಿಹ್ವೆಯೆಂಬ ಭಾಜನದಲ್ಲಿ
ಮಧುರ ಆಮ್ಲ ಲವಣ ಕಟು ಕಷಾಯ
ತಿಕ್ತವೆಂಬ ಷಡ್ವಿಧ ರುಚಿಯನು
ಲಿಂಗಾವಧಾನ ಮನದಿಂದ ಜಿಹ್ವೆಯ ಚೈತನ್ಯವರಿದು,
ಹೃದಯಕಮಲಪೀಠಿಕೆಯಲ್ಲಿಹ ಪ್ರಾಣೇಶ್ವರನಾದ ಪ್ರಾಣಲಿಂಗಕ್ಕೆ
ಕರಣಂಗಳು ಒಮ್ಮುಖವಾಗಿ ಅರ್ಪಿಸುವೊಡೆ ರುಚ್ಯರ್ಪಿತ.
ಆ ರುಚಿಪ್ರಸಾದವನು ಪರಿಣಾಮ ಭಾಜನದಲ್ಲಿ
ಸಾವಧಾನ ಸಮರಸದಿಂದರ್ಪಿಸುವಲ್ಲಿ
ತೃಪ್ತಿ ಲಿಂಗಮುಖದಿಂದ ತೃಪ್ತಿಪ್ರಸಾದಿ.
ರೂಪಂ ಸಮರ್ಪಯೇ ಲಿಂಗೇ ರುಚಿಮಪ್ಯರ್ಪಯೇತ್ತಥಾ |
ಉಭಯಾರ್ಪಣ ಹೀನಶ್ಯ ಪ್ರಸಾದೋ ನಿಷ್ಫಲೋ ಭವೇತ್ ||
ಇಂತೆಂದುದಾಗಿ,ಇದು ಕಾರಣ, ಪ್ರಸಾದದಾದಿ ಕುಳವ
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರೆ ಬಲ್ಲರು.
Art
Manuscript
Music
Courtesy:
Transliteration
Bhājanadalli aḷavaṭṭu, gaḍanisida, padārthaṅgaḷa rūpa
tanna karaṇaṅgaḷalli avadhāna nirīkṣaṇeyinda nirīkṣisi,
liṅgāvadhāna nirīkṣaṇeyinda nirīkṣisi,
ā padārthavanu liṅgatanuvina karadinda muṭṭi,
padārthada mr̥du kaṭhiṇa śīta uṣṇaṅgaḷa sōṅkanu
iṣṭaliṅga mukhadalli arpisi,
rūpavarpisuvaḍe iṣṭaliṅgārpita.
Ā iṣṭaliṅgamukhadindarpitavāda rūpaprasādavanu
rucikaradinda padārthamaṁ māḍi,
jihveyemba bhājanadalli
madhura āmla lavaṇa kaṭu kaṣāya
tiktavemba ṣaḍvidha ruciyanu
liṅgāvadhāna manadinda jihveya caitan'yavaridu,
Hr̥dayakamalapīṭhikeyalliha prāṇēśvaranāda prāṇaliṅgakke
karaṇaṅgaḷu om'mukhavāgi arpisuvoḍe rucyarpita.
Ā ruciprasādavanu pariṇāma bhājanadalli
sāvadhāna samarasadindarpisuvalli
tr̥pti liṅgamukhadinda tr̥ptiprasādi.
Rūpaṁ samarpayē liṅgē rucimapyarpayēttathā |
ubhayārpaṇa hīnaśya prasādō niṣphalō bhavēt ||
intendudāgi,idu kāraṇa, prasādadādi kuḷava
mahāliṅga kallēśvarā, nim'ma śaraṇare ballaru