ಮಾಡಿದ ಮಾಟದೊಳಗೆ ನುಡಿ ಘನವಾಡದೆ ಭಕ್ತನೆ? ಅಲ್ಲ.
ಶೀಲವ ಹೇಳಿ ಮಾಡಿಸಿಕೊಂಬನ್ನಕ್ಕರ ಶೀಲವಂತನೆ? ಅಲ್ಲ.
ನೋಡಿ ಸಯಿಧಾನಬೇಕೆಂಬನ್ನಕ್ಕರ ನಿತ್ಯನೇಮಿಯೆ? ಅಲ್ಲ.
ಶೀಲ, ಮೀಸಲು, ಭಾಷೆ ಲಿಂಗದೊಡಲು,
ಪ್ರಾಣ ಜಂಗಮವಾಗಿಪ್ಪ ಭಕ್ತಂಗೆ
ಮಹಾಲಿಂಗ ಕಲ್ಲೇಶ್ವರಲಿಂಗ ತಾನೆ ಪ್ರಾಣವಾಗಿಪ್ಪನು.
Art
Manuscript
Music Courtesy:
Video
TransliterationMāḍida māṭadoḷage nuḍi ghanavāḍade bhaktane? Alla.
Śīlava hēḷi māḍisikombannakkara śīlavantane? Alla.
Nōḍi sayidhānabēkembannakkara nityanēmiye? Alla.
Śīla, mīsalu, bhāṣe liṅgadoḍalu,
prāṇa jaṅgamavāgippa bhaktaṅge
mahāliṅga kallēśvaraliṅga tāne prāṇavāgippanu.