Index   ವಚನ - 83    Search  
 
ಮುನಿಸ ಮುನಿದಡೆ ಶ್ರೀಗಂಧದ ಮರುಡಿನಂತಿರಬೇಕವ್ವಾ. ತೇದಡೆ ತೆಗೆದಡೆ ಚಂದನದ ಶೀತಲದ ಹಾಗೆಯಾಗಿರಬೇಕವ್ವಾ. ಹೆಣಗುವಲ್ಲಿ ಕೈಹಿಡಿದು ಹೆಣಗುತ್ತಿರಬೇಕವ್ವಾ. ಮಹಾಲಿಂಗ ಕಲ್ಲೇಶ್ವರನ ನೆರೆವ ಭರದಿಂ ನೊಂದು, ಉದಕ ಮೇಲ್ವಾಯ್ದ ಹಾಗಿರಬೇಕವ್ವಾ.