Index   ವಚನ - 1    Search  
 
ಇಷ್ಟಲಿಂಗವೆ ಬಸವಣ್ಣನೆಂದರಿದು, ತಮ್ಮಇಷ್ಟಲಿಂಗದಲ್ಲಿ ನಿರವಯನೈದಿದರು ಅಕ್ಕನಾಗಲಾಂಬಿಕೆಯಮ್ಮನವರು. ಜಂಗಮಪ್ರಸಾದವೆ ಬಸವಣ್ಣನೆಂದರಿದು, ತಮ್ಮ ಜಂಗಮಪ್ರಸಾದದಲ್ಲಿ ನಿರವಯನೈದಿದರು ಅಕ್ಕಮಹಾದೇವಿಯಮ್ಮನವರು. ಪ್ರಸಾದಲಿಂಗವೆ ಬಸವಣ್ಣನೆಂದರಿದು, ತಮ್ಮ ಪ್ರಸಾದಲಿಂಗದಲ್ಲಿ ನಿರವಯನೈದಿದರು ಮುಕ್ತಾಯಕ್ಕಗಳು, ಆಚಾರಲಿಂಗವೆ ಬಸವಣ್ಣನೆಂದರಿದು, ತಮ್ಮಆಚಾರಲಿಂಗದಲ್ಲಿ ನಿರವಯನೈದಿದರು ಅಸಂಖ್ಯಾತ ಮಹಾಗಣಂಗಳೆಲ್ಲರು. ಗೂಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವಾ, ಬಸವಣ್ಣನಿಂದ ನಿರವಯಲ ಲಿಂಗವ ಕಂಡೆನು.