Index   ವಚನ - 2    Search  
 
ಎನ್ನ ಭಕ್ತನೆಂಬರಯ್ಯಾ ಎನ್ನ ಭಕ್ತಸ್ಥಲವ ಬಸವಣ್ಣ ಸೊರೆಗೊಂಡನಾಗಿ, ಎನ್ನ ಮಾಹೇಶ್ವರನೆಂಬರಯ್ಯಾ ಎನ್ನ ಮಹೇಶ್ವರಸ್ಥಲವ ಮಡಿವಾಳಯ್ಯ ಸೊರೆಗೊಂಡನಾಗಿ, ಎನ್ನ ಪ್ರಸಾದಿಯೆಂಬರಯ್ಯಾ, ಎನ್ನ ಪ್ರಸಾದಿಸ್ಥಲವ ಚೆನ್ನಬಸವಣ್ಣ ಸೊರೆಗೊಂಡನಾಗಿ, ಎನ್ನ ಪ್ರಾಣಲಿಂಗಿಯೆಂಬರಯ್ಯಾ, ಎನ್ನ ಪ್ರಾಣಲಿಂಗಿಸ್ಥಲವ ನುಲಿಯ ಚಂದಯ್ಯ ಸೂರೆಗೊಂಡನಾಗಿ, ಎನ್ನ ಶರಣನೆಂಬರಯ್ಯಾ ಎನ್ನ ಶರಣಸ್ಥಲವ[ಘಟ್ಟಿ]ವಾಳಯ್ಯ ಸೊರೆಗೊಂಡನಾಗಿ, ಎನ್ನ ಐಕ್ಯನೆಂಬರಯ್ಯಾ ಎನ್ನ ಐಕ್ಯಸ್ಥಲವ ಅಜಗಣ್ಣಸೊರೆಗೊಂಡನಾಗಿ. ಇಂತೆನ್ನಂಗಸ್ಥಲವನೆಲ್ಲವ ನಿಮ್ಮ ಲಿಂಗೈಕ್ಯರು ಸೊರೆಗೊಂಡರಾಗಿ, ಎನ್ನ ಲಿಂಗೈಕ್ಯನೆಂಬರು ಗೊಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವಾ.