Index   ವಚನ - 3    Search  
 
ಬಸವಣ್ಣನ ಏಕಾಕ್ಷರದಿಂದ ಷಡಾಕ್ಷರ ಪುಟ್ಟಿತ್ತು. ಇನ್ನು ಬಸವಣ್ಣನ ಏಕಾಕ್ಷರ, ತ್ರಯಾಕ್ಷರ, ಪಂಚಾಕ್ಷರ, ಷಡಾಕ್ಷರವೆನ್ನ ಸರ್ವಾಗಮದಲ್ಲಿ ತುಂಬಿ ಅಕ್ಷರಮಯವಾಯಿತ್ತು, ಗೂಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ, ಬಸವಪ್ರಿಯ ಕೂಡಲಸಂಗಮದೇವಾ ಬಸವಣ್ಣನ ಕಾರಣ್ಯದಿಂದ.