Index   ವಚನ - 5    Search  
 
ಬಸವಣ್ಣನೆಂಬ ಆಚಾರಲಿಂಗವ ಪಿಡಿದು ಅನಿಮಿಷಯ್ಯ ಬಸವಣ್ಣನಂತಾದ. ಬಸವಣ್ಣನೆಂಬ ಗುರುಲಿಂಗವ ಪಿಡಿದು ಮಡಿವಾಳಯ್ಯ ಬಸವಣ್ಣನಂತಾದ. ಬಸವಣ್ಣನೆಂಬ ಶಿವಲಿಂಗವ ಪಿಡಿದು ಚೆನ್ನಬಸವಯ್ಯ ಬಸವಣ್ಣನಂತಾದ. ಬಸವಣ್ಣನೆಂಬ ಜಂಗಮಲಿಂಗವ ಪಿಡಿದು ಸಿದ್ಧರಾಮಯ್ಯ ಬಸವಣ್ಣನಂತಾದ. ಬಸವಣ್ಣನೆಂಬ ಪ್ರಸಾದಲಿಂಗವ ಪಿಡಿದು ಘಟ್ಟಿವಾಳಯ್ಯ ಬಸವಣ್ಣನಂತಾದ. ಬಸವಣ್ಣನೆಂಬ ಮಹಾಲಿಂಗವ ಪಿಡಿದು ಅಜಗಣ್ಣ ಬಸವಣ್ಣನಂತಾದ. ಬಸವಣ್ಣನೆಂಬ ಗುಹೇಶ್ವರಲಿಂಗವ ಪಿಡಿದು ಪ್ರಭುದೇವರು ಜ್ಯೋತಿರ್ಮಯನಾದ. ಅಸಂಖ್ಯಾತ ಮಹಾಗಣಂಗಳೆಲ್ಲರೂ ಬಸವಣ್ಣನೆಂಬ ನಿರವಯಲಿಂಗವ ಪಿಡಿದು, ಶರಣಸತಿ ಲಿಂಗಪತಿಯಾದರು. ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ, ಬಸವಪ್ರಿಯ ಕೂಡಲಸಂಗಮದೇವಾ, ಬಸವಣ್ಣನ ಶ್ರೀಪಾದಕ್ಕೆ ನಮೋ ನಮಃ ಎನುತಿರ್ದೆನು.