Index   ವಚನ - 1    Search  
 
ಅಖಂಡ[ಗೋಳಕಾ]ಕಾರವಾದ ಸ[ಹಜ] ನಿ[ರಂಜನ] ವಸ್ತು ಲಿಂಗವೆನಿಸುವದಯ್ಯಾ. ನಿಂದಲ್ಲಿ ಒಂದಾಯಿತ್ತು, ಒಂದಾದಲ್ಲಿ ಉಭಯವಾಗಿತ್ತು. ಪೂಜಿಸಿದಲ್ಲಿ ಮೂರಾಯಿತ್ತು, ಆಚರಿಸಿದಲ್ಲಿ ಆರಾಯಿತ್ತು. ಆನಂದಿಸಿದಲ್ಲಿ ಮೂವತ್ತಾರು ಆಯಿತ್ತು. ಗುಣಿತ ಮಾಡಿದಲ್ಲಿ ಇನ್ನೂರ ಹದಿನಾರಾಯಿತ್ತು. ಅಖಂಡಲಿಂಗದಿಂದ ಚಿದ್ರೂಪವಾದ ಪರಿಯನು ಶಿಷ್ಯಂಗೆ ಗುರುವು ನಿರೂಪಿಸಿದ ಕಾಣಾ, ಜಂಗಮಲಿಂಗಪ್ರಭುವೆ.