Index   ವಚನ - 2    Search  
 
ಅಟ್ಟಂಬಾರಣ್ಯದೊಳಗೊಂದು ಕಟ್ಟಲಿಲ್ಲದ ದೇಗುಲವುಳಿದಿಪ್ಪುದು ನೋಡಿರಯ್ಯಾ! ಆ ದೇಗುಲದೊಳಗೊಂದು ಸರ್ವಜೀವನೆಂಬ ರತ್ನ ಬಿದ್ದಿಪ್ಪುದು ನೋಡಿರಯ್ಯಾ! ಆ ರತ್ನ ಮೂರುಲೋಕಕ್ಕೆ ಮೈದೋರದಿಪ್ಪುದು ನೋಡಿರಯ್ಯಾ! ನೆಟ್ಟಕಲ್ಲಿನೊಳಗೊಬ್ಬ ಹುಟ್ಟುಗುರುಡನುದ್ಭವಿಸಿ ಬಂದು, ಆ ಸರ್ವಜೀವನೆಂಬ ರತ್ನವ ಮುಟ್ಟಿ ನೋಡಿದರೆ, ಆ ಹುಟ್ಟು ಗುರುಡ ತಾನೆ ರತ್ನವಾದ ಆದ ಕಂಡು ನಾ ಬೆರಗಾದೆನಯ್ಯಾ, ಜಂಗಮಲಿಂಗಪ್ರಭುವೆ.