Index   ವಚನ - 6    Search  
 
ಭಕ್ತ ಭಕ್ತನೆಂದೆಂಬರು, ಭಕ್ತನೆನಿಸುವಾತ ಪಂಚಭೂತಕಾಯವ ಧರಿಸಿದ ಮಾನವರಲ್ಲಿ ಹತ್ತರಲ್ಲಿ ಹನ್ನೊಂದು. ಭಕ್ತನಿಂದ ಗುರುವೆನಿಸಿತ್ತು, ಲಿಂಗವೆನಿಸಿತ್ತು, ಜಂಗಮವೆನಿಸಿತ್ತು. ವಿಭೂತಿ ರುದ್ರಾಕ್ಷಿ ಪಾದತೀರ್ಥ ಪ್ರಸಾದ ಮಂತ್ರವಾದಿಯಾದ ಅಷ್ಟಾವರಣ ಪ್ರಸನ್ನತೆಯಾಯಿತ್ತು. ಅಂತಪ್ಪ ಭಕ್ತನೆಂಬ ನಾಮವಿಲ್ಲದಿರ್ದಡೆ ಗುರುಲಿಂಗಜಂಗಮವೆಂಬ ಹೆಸರೆಲ್ಲಿಯದು? ವಿಭೂತಿ ರುದ್ರಾಕ್ಷಿಯ ಧರಿಸುವರಾರು ? ಪಾದತೀರ್ಥಪ್ರಸಾದವ ಕೊಂಬವರಾರು? ಮಂತ್ರೋಚ್ಛರಣೆಯ ಉಲುಹೆಲ್ಲಿಯದು? ಅದು ಕಾರಣ, ಭಕ್ತನಿಂದಧಿಕವಿಲ್ಲವೆಂದು ಸಮಸ್ತವಿಶ್ವಮೆಲ್ಲಮಂ ತನ್ನ ನೆನಹುಮಾತ್ರದಲ್ಲಿಯೆ ಉಂಟಿಲ್ಲವೆನಿಸುವ ಪರಬ್ರಹ್ಮವೆ ಆ ಭಕ್ತನ ಹೃದಯಕಮಲಮಧ್ಯದಲ್ಲಿ ಜ್ಯೋತಿಸ್ವರೂಪನಾಗುತ್ತಿರ್ಪನಯ್ಯ, ಮಹಾಲಿಂಗ ಶಶಿಮೌಳಿ ಸದಾಶಿವ.