Index   ವಚನ - 7    Search  
 
ಶರಣಸತಿ ಲಿಂಗಪತಿಯೆನಿಸಿದ್ದಲ್ಲಿ, ಪಂಚೇಂದ್ರಿಯಂಗಳಿಗೆ ಪತಿವ್ರತಾಧರ್ಮವನುಂಟುಮಾಡಿ, ಮನೋನಿಜದ ಕಂಕಣವ ಕಟ್ಟಿ ತನ್ನಿಷ್ಟಲಿಂಗದ ಪೂಜಾವಿಧಾನಮಂ ಸ್ತೋತ್ರ ಮಂತ್ರ ವ್ರತವನುಂಟುಮಾಡಿ, ದುಗುಡಣೆಯಿಂದ ಪೂರ್ಣವೆನಿಸಿ, ನೇತ್ರ ಸೂತ್ರಂಗಳ ಶಿವಾಲಿಂಗಾರ್ಚನೆಯ, ಅಲಂಕಾರದ ಚೆಲ್ವಿನಲ್ಲಿ ಬೆಸುಗೆಗೊಳಿಸಿ, ಆನಂದಾಶ್ರು ಬಟ್ಟಾಡಿ ತನ್ನ ಭಕ್ತಿಭಾವದ ನಿಜವ, ಲಿಂಗವೆಂಬ ಪತಿಯಲ್ಲಿ ಸಮರಸಂಗೈದು, ತನುಪುಳಕಮಂ ತಳೆದು ಶರಣನೊಪ್ಪಿಸಿ, ಶಿವಭಕ್ತರ ಹಸ್ತಸ್ಪರ್ಶನದಿಂದ ಪವಿತ್ರವೆನಿಸಿ, ಲಿಂಗಾಣತಿಯಿಂದ ಬಂದ ಪದಾರ್ಥವ ಮಹಾಲಿಂಗಪ್ರಸಾದವೆಂದು ಇಷ್ಟಲಿಂಗಮುಖವ ತಿಳಿದು, ಸಮರ್ಪಣೆಯ ಮಾಡಿ, ಸಹಭೋಜನವನುಂಡು, ಪರಮಾನಂದವ ಅಪ್ಪಾತನೆ ಶರಣನಯ್ಯಾ, ಮಹಾಲಿಂಗ ಶಶಿಮೌಳಿ ಸದಾಶಿವಾ.