ಅಂಗವಿಸದಿರು ಇನ್ನು ಹಿಂಗಿಹೋಗೆಂದೆನುತ
ಮಂಗಳಾತ್ಮಕ ನುಡಿದ ಗುರುಕರುಣದಾ
ಅಂಗವಿಸದಿರು ಎಂದನಂಗಹರ ಪ್ರಭುರಾಯ
ಬಂದು ನೂಕಿದನೆನ್ನನೇಡಿಸುವ ಮಾಯೆಯನು.
ಮಂಗಳಾತ್ಮಕ ಕಪಿಲಸಿದ್ಧಮಲ್ಲೇಶ್ವರನೆ
ಲಿಂಗ, ನಿಮ್ಮನು ಅರಿವೆ;
ಮಾಯೆಯ ಗೆಲುವೆ ಪ್ರಭುವಿನಂದದಲಿ.
Transliteration Aṅgavisadiru innu hiṅgihōgendenuta
maṅgaḷātmaka nuḍida gurukaruṇadā
aṅgavisadiru endanaṅgahara prabhurāya
bandu nūkidanennanēḍisuva māyeyanu.
Maṅgaḷātmaka kapilasid'dhamallēśvarane
liṅga, nim'manu arive;
māyeya geluve prabhuvinandadali.