•  
  •  
  •  
  •  
Index   ವಚನ - 28    Search  
 
ಅಘವಿಧ್ವಂಸನನರ್ಚಿಸಿ[ಹೆ]ನೆಂದು ಹೋದಡೆ ಅಘವೆ ಪರಿವೇಷ್ಟಿಸಿತಯ್ಯಾ ಎನ್ನನು. ಇದನ ಹೇಂಗೆ ಕಳೆವೆನಯ್ಯಾ? ಇದ ಕಳವೆನಿನ್ನು ನಿನ್ನವರ ಸಂಗದಿಂದ; ಇದ ಕಳೆವೆ ನೀನು ಗುರುವಾಗಿ ಬಂದಡೆ. ಎನ್ನವರ ಸಂಗವಿಲ್ಲದೆ ಅಲ್ಲದಿದ್ದಡೆ ನಿನ್ನ ದೈವತ್ವದಿಂದ ಕಳೆದೆನೆಂದಡೆ ಎನ್ನ ಸುತ್ತಿ ಮುತ್ತಿತೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aghavidhvansananarcisi[he]nendu hōdaḍe aghave parivēṣṭisitayyā ennanu. Idana heṅge kaḷevenayyā? Ida kaḷaveninnu ninnavara saṅgadinda; ida kaḷeve nīnu guruvāgi bandaḍe. Ennavara saṅgavillade alladiddaḍe ninna daivatvadinda kaḷedenendaḍe enna sutti muttitai kapilasid'dhamallikārjunā.