ವಚನ - 27     
 
ಅಗ್ನಿಸ್ತಂಭವ ಬಲ್ಲೆವೆಂಬರಯ್ಯ! ಅನ್ನವನಿಕ್ಕುವರಯ್ಯ! ಜಲಸ್ತಂಭವ ಬಲ್ಲೆವೆಂಬರಯ್ಯ! ಅರವಟ್ಟಿಗೆಯನಿಕ್ಕುವರಯ್ಯ! ಖಡ್ಗಸ್ತಂಭವ ಬಲ್ಲೆವೆಂಬರಯ್ಯ! ಮರೆಹೊಕ್ಕರೆ ಕಾವರಯ್ಯ! ಇಂತೀ ತ್ರಿವಿಧಗುಣವ ಮೀರಿದವರು ದೇವರಿಗೆ ದೇವರಾಗಿಪ್ಪರು ಕಾಣಾ! ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ.