ವಚನ - 43     
 
ಅತಿಶರಣರ ಕೂಡೆ ಮತಿವಂತ ಭಕ್ತರು ಸಂಗ ಮಾಡಲಾಗದು. ದಾಸಿಯ ಸಂಗ ವೇಶಿಯ ಸಂಗ ದಾಸರಲ್ಲದೆ ರಾಜರು ಮಾಡಲಾಗದು. ಚಂಪಕಸಂಗ ಭ್ರಮರ ಮಾಡಲಾಗದು. ಕಪಿಲಸಿದ್ಧಮಲ್ಲಿಕಾರ್ಜುನಾ, ಅತಿ ಶರಣರ ಸಂಗ ಗುರುಭಕ್ತರು ಮಾಡಲಾಗದು.