•  
  •  
  •  
  •  
Index   ವಚನ - 166    Search  
 
ತನ್ನ ಮುಟ್ಟಿ ನೀಡಿದುದೆ ಪ್ರಸಾದ, ತನ್ನ ಮುಟ್ಟ[ದೆ]ನೀಡಿದುದೆ ಓಗರ. ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ. ಇದು ಕಾರಣ-ಇಂತಪ್ಪ ಭೃತ್ಯಾಚಾರಿಗಲ್ಲದೆ ಪ್ರಸಾದವಿಲ್ಲ ಗುಹೇಶ್ವರಾ.
Transliteration Tanna muṭṭi nīḍidude prasāda, tanna muṭṭa[de]nīḍidude ōgara. Liṅgakke koṭṭu koṇḍaḍe prasādi. Idu kāraṇa-intappa bhr̥tyācārigallade prasādavilla guhēśvarā.
Hindi Translation हृदयपूर्वक दिया हुआ ही प्रसाद है, बिना हृदयपूर्वक दिया हुआ आहार है। लिंग को देकर लौटा लिया ही प्रसादी है। इस कारण, ऐसा भृत्याचारी के बिना प्रसाद नहीं है गुहेश्वरा। Translated by: Eswara Sharma M and Govindarao B N
Tamil Translation இதயம் நிறைந்து அளிப்பதே பிரசாதம், மனம் நிறைந்து ஈயவில்லைஎனின் அது படையல், இலிங்கத்திற்கு ஈந்து, பெறின் பிரசாதி. எனவே இத்தகு தொண்டனுக்கன்றி பிரசாதம் இல்லை குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಇದು ಕಾರಣ = ಪ್ರಸಾದದ ಬಗೆ ಇದಾದುದರಿಂದ; ತನ್ನ ಮುಟ್ಟಿ = ಮನಃಪೂರ್ವಕ, ಹೃದಯತಹ, ಭಾವತುಂಬಿ; ಪ್ರಸಾದ = ಯಾವುದನ್ನು ಸ್ವೀಕರಿಸಿದರೆ ದೇಹ ಮತ್ತು ಮನಸ್ಸುಗಳು ಪವಿತ್ರವಾಗುವುವೋ ಅಂಥ ಅರ್ಪಿತ ಪದಾರ್ಥವು; ಭೃತ್ಯಾಚಾರಿ = ವಿಶ್ವದ ಎಲ್ಲ ವಸ್ತುಗಳೂ ಲಿಂಗದ ಸೊಮ್ಮು, ಯಾವ ವಸ್ತುವೂ ನನ್ನದಲ್ಲ, ನಾನು ಆ ಲಿಂಗದೇವನ ಭೃತ್ಯ, ನಾನು ಮಾಡುವುದೆಲ್ಲಾ ಲ; Written by: Sri Siddeswara Swamiji, Vijayapura