ಆಧಿ ಇಲ್ಲದಿರ್ದಡೆ ಲಿಂಗಪ್ರಸಾದಿಯೆಂಬೆನು,
ವ್ಯಾಧಿ ಇಲ್ಲದಿರ್ದಡೆ ಜಂಗಮಪ್ರಸಾದಿಯೆಂಬೆನು.
ಲೌಕಿಕವ ಸೋಂಕದಿರ್ದಡೆ ಸಮಯಪ್ರಸಾದಿಯೆಂಬೆನು.
ಇಂತೀ ತ್ರಿವಿಧ ಪ್ರಸಾದಸಂಬಂಧಿಯಾದಡೆ
ಆತನ ಅಚ್ಚಪ್ರಸಾದಿಯೆಂಬೆನು ಕಾಣಾ ಗುಹೇಶ್ವರಾ.
Transliteration Ādhi illadirdaḍe liṅgaprasādiyembenu,
vyādhi illadirdaḍe jaṅgamaprasādiyembenu.
Laukikava sōṅkadirdaḍe samayaprasādiyembenu.
Intī trividha prasādasambandhiyādaḍe
ātana accaprasādiyembenu kāṇā guhēśvarā.
Hindi Translation बिना आधि लिंग प्रसादी कहूँगा।
बिना व्याधि जंगम प्रसादी कहूँगा।
लौकिक में न लगे तो समय प्रसादी कहूँगा।
इनत्रिविध प्रसादी संबंधि को
श्रेष्ठप्रसादी कहूँगा देखो गुहेश्वरा।
Translated by: Eswara Sharma M and Govindarao B N
Tamil Translation ஆதி இல்லையெனின் இலிங்கபிரசாதி என்பேன்,
வியாதி இல்லையெனின் ஜங்கமபிரசாதி என்பேன்,
உலகியலின் வேறுபாடு இல்லையெனின் ஸமய பிரசாதி என்பேன்,
இவ்விதம் மூவித பிரசாத தொடர்புடையவனை,
அச்சபிரசாதி என்பேன் காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಧಿ = ಮನೋಬಾಧೆ, ಚಿಂತೆ, ವ್ಯಥೆ; ವ್ಯಾಧಿ = ದೈಹಿಕಬಾಧೆ, ವಿಷಯಗಳ ಅತಿಭೋಗದಿಂದ ಉಂಟಾಗುವ ದೈಹಿಕ ವೇದನೆ;
Written by: Sri Siddeswara Swamiji, Vijayapura