ಅರೂಪ ರೂಪ ಭಾವನೆ;
ರೂಪ ಅರೂಪ ಭಾವನೆ,
ಸಾರೂಪ್ಯಲಿಂಗವೆ ಶರಣು ಶರಣು
ಅವಧಾರವಧಾರು ಅಯ್ಯಾ,
ಎನ್ನ ಕರಣಶುದ್ಧವ ಮಾಡುವನೆ;
ಕರುಣಾಕರರೂಪನೆ
ತನುಮನಧನಕ್ಕೆ ಒಡೆಯನೆ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Arūpa rūpa bhāvane;
rūpa arūpa bhāvane,
sārūpyaliṅgave śaraṇu śaraṇu
avadhāravadhāru ayyā,
enna karaṇaśud'dhava māḍuvane;
karuṇākararūpane
tanumanadhanakke oḍeyane,
kapilasid'dhamallikārjunā.